Sunday, September 9, 2018

ದೇವರು - ಯಾವ ದೇವರು?

ನಾವು ಮಾಡಿರೋ ದೇವರೋ ಅಥವಾ ನಮ್ಮನ್ನು ಮಾಡಿದ ದೇವರೋ?

ಅದೊಂದು ಕುಟುಂಬ ನನ್ನ ಕುಟುಂಬವೇ ಎಂದಿಟ್ಟುಕೊಳ್ಳೋಣ. ಆ ಕುಟುಂಬದಲ್ಲಿ ನಾಲ್ಕು ಮಂದಿ - ಗಂಡ, ಹೆಂಡತಿ ಮತ್ತಿಬ್ಬರು ಮಕ್ಕಳು; ಮಗಳಿಗೆ ನಾಲ್ಕು ವರ್ಷ, ಮಗನಿಗೆ ಒಂದೂಕಾಲು ವರ್ಷ. ಆ ಕುಟುಂಬ ವಾಸಿಸುವುದು ಅಮೆರಿಕೆಯಲ್ಲಿ. ರಜೆಗೆಂದು ಭಾರತಕ್ಕೆ ತೆರಳಿದ್ದು ರಜೆ ಮುಗಿಸಿ ಮರಳಿ ಅಮೆರಿಕೆಗೆ ಹೊರಡುವ ಸಮಯ ಬಂದಿತ್ತು.

ಭಾರತದಲ್ಲಿ ನಮ್ಮ ಮನೆ ಇದ್ದದ್ದು ದಾವಣಗೆರೆಯಲ್ಲಿ. ದಾವಣಗೆರೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸುಮಾರು ಮುನ್ನೂರು ಕಿಲೋಮೀಟರ್ ದೂರ. ಏನೂ ಅಡಚಣೆ ಇಲ್ಲದೆ ಸಾಗಿದರೆ ಸರಿಸುಮಾರು ಐದು ತಾಸಿನ ದಾರಿ. ಈ ಪ್ರಯಾಣಕ್ಕೆ ಸಜ್ಜಾಗುತ್ತಿದ್ದ ನಾವು ಕೊನೆಯ ಘಳಿಗೆಯ ಲಗೇಜಿನ ಪರಿಶೀಲನೆ ನಡೆಸುತ್ತಿದ್ದೆವು. ಉಡುಗೊರೆಯಾಗಿ ಬಂದ ಗಣೇಶನ ವಿಗ್ರಹವೊಂದು ಯಾವ ಬ್ಯಾಗಿನಲ್ಲೂ ಜಾಗವಿಲ್ಲದ ಕಾರಣ ಮನೆಯಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಮನೆಯವರ ಬಲವಂತದಿಂದ  ಏರ್ಲೈನ್ಸ್ನವರ ಮಿತಿಗಿಂತಲೂ  ಎರಡು ಕಿಲೋಗ್ರಾಮ್ ಹೆಚ್ಚಾದರೂ ಅದನ್ನು ಕೊಂಡುಹೋಗಬೇಕಾಗಿ ಬಂದಿತು. ನಾನು ಅನುಮಾನಿಸುತ್ತಿರುವಾಗ ನನ್ನ ತಂದೆಯವರು, "ಈ ಗಣೇಶನಿಗೆ ನಿನ್ನಿಂದ ಪೂಜೆ ಮಾಡುಸ್ಕೊಬೇಕು ಅಂತಿದ್ರೆ ಹೇಗಾದರೂ ಮಾಡಿ ನಿನ್ನ ಜೊತೆ ಬರ್ತಾನೆ. ಯೋಚನೆ ಮಾಡಬೇಡ" ಎಂದರು. ಸರಿ ಏನೋ ಧೈರ್ಯ ಮಾಡಿ ಲಗೇಜ್ ಸ್ವಲ್ಪ ಭಾರವಾದರೂ ಗಣೇಶನನ್ನು ಜೊತೆಯಲ್ಲಿಯೇ ಕರೆದುಕೊಂಡು ಹೊರೆಟೆವು.

ನಮ್ಮನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಒಂದು ಟ್ರಾಕ್ಸ್ ಕ್ರೂಸರ್ ವಾಹನವು ಸಜ್ಜಾಗಿ ಮನೆಯ ಹೊರಗಡೆ ನಿಂತಿತ್ತು. ಅದರಲ್ಲಿ ನಮ್ಮ ಸಾಮಾನುಗಳನ್ನೆಲ್ಲ ಜೋಡಿಸಿ ನಮ್ಮ ಕುಟುಂಬವು ಪ್ರಯಾಣ ಬೆಳೆಸಿತು. ನಾವು ದಾವಣಗೆರೆಯಿಂದ ಹೊರಟಾಗ ವಿಮಾನವು ಹೋರಾಡಲು ಸುಮಾರು ಎಂಟು ತಾಸು ಸಮಯವಿತ್ತು. ಹಾಗಾಗಿ ಸರಿಯಾದ ಸಮಯಕ್ಕೆ ತಲುಪುವೆವು ಎಂದು ಸ್ವಲ್ಪ ನಿದ್ದೆ ಮಾಡಲು ಮುಂದಾದೆನು. ವಾಹನ ಚಾಲಕನು ವೇಗ ಮಿತಿಗಿಂತಲೂ ಸ್ವಲ್ಪ ನಿಧಾನವಾಗಿಯೇ ಚಲಿಸುತ್ತಿದ್ದನು. ಹೀಗೆಯೇ ಸುಮಾರು ಎರಡೂವರೆ ತಾಸಿನ ಬಳಿಕ ಚಕ್ರದ ಬಳಿ ಏನೋ ಶಬ್ದವಾಗಿ ಎಚ್ಚರವಾಯಿತು. ಅದೇ  ಸಮಯದಲ್ಲಿ ನನ್ನ ತಂದೆಯವರ ದೂರವಾಣಿ ಕರೆಯೂ ಬಂದಿತು. ಅವರಿಗೆ "ಟೈರ್ ಪಂಚರ್ ಆಗಿರ್ಬೇಕು ನೋಡ್ತೀನಿ" ಎಂದು ಹೇಳಿ ಕರೆಯನ್ನು ಕಟ್ ಮಾಡಿದೆನು. ಚಾಲಕನಿಗೆ ಸ್ಟೆಪ್ನಿ ಇದೆಯಾ ಎಂದು ಕೇಳಿ ಇದೆ ಎಂದು ಉತ್ತರ ಬಂದಾಗ ಸ್ವಲ್ಪ ಧೈರ್ಯ ಬಂದಿತು. ಆಗ ಸಮಯ ರಾತ್ರಿ ಸುಮಾರು ಹತ್ತು ಘಂಟೆಯಾಗಿತ್ತು.

ವಾಹನವು ಯಾವುದೋ ಒಂದು ಮೇಲ್ಸುತುವೆಯ ಮೇಲೆ ನಿಂತಿತ್ತು. ಸೇತುವೆಯ ಮೇಲೆ ನಿಂತಿದ್ದ ಕಾರಣ ಕೊನೆಯ ಲೇನಿನಲ್ಲೇ ನಿಂತಿತ್ತು. ಹಿಂದಿನಿಂದ ಬರುತ್ತಿದ್ದ ವಾಹನಗಳು ಲೇನ್ ಬದಲಾಯಿಸಿ ಪಕ್ಕಕ್ಕೆ ಹೋಗುತ್ತಿದ್ದವು (ಅದೃಷ್ಟವಶಾತ್!). ನಾನು ನನ್ನ ಫೋನಿನ ಫ್ಲಾಶ್ ಲೈಟ್ ಉಪಯೋಗಿಸಿ ಚಾಲಕನಿಗೆ ಚಕ್ರವನ್ನು ಬದಲಾಯಿಸಲು ಬೆಳಕು ಹಿಡಿದೆನು. ಚಕ್ರವು ಬರ್ಸ್ಟ್ ಆದಂತೆ ಕಾಣುತ್ತಿತ್ತು. ಇನ್ನು ಏನಿದ್ದರೂ ಸ್ಟೆಪ್ನಿ ನಂಬಿಕೊಂಡೇ ವಿಮಾನ ನಿಲ್ದಾಣ ಮುಟ್ಟಬೇಕಿತ್ತು. ಆದರೆ ಜಾಕ್ ಸರಿ ಇಲ್ಲದ ಕಾರಣ ಸ್ಟೆಪ್ನಿಯನ್ನು ಸಹ ಕೂರಿಸಲು ಆಗಲಿಲ್ಲ. ಆಗ ನನಗೆ ವಿಮಾನವು ನಮ್ಮನ್ನು ಇಲ್ಲಿಯೇ ಬಿಟ್ಟು ಹಾರಬಹುದು ಎಂದೆನಿಸಿತು. ಅದಕ್ಕಿಂತ ಹೆಚ್ಚಾಗಿ ಆ ಕತ್ತಲೆಯಿಂದ ನನ್ನ ಕುಟುಂಬವನ್ನು ಹೇಗೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು ಎಂದು ಘಾಬರಿಯಾದೆನು.

ಹೀಗೆ ಯೋಚಿಸುತ್ತಿರುವಾಗ ಯಾವುದೋ ಒಂದು ವಾಹನವು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿತು. ಆ ವಾಹನದಿಂದ ನಾಲ್ಕು ಜನ ಯುವಕರು ಕೆಳಗಿಳಿದು ನಮ್ಮ ವಾಹನದ ಬಳಿ ಬಂದರು. ಮೊದಲು ಸ್ವಲ್ಪ ಗಾಬರಿಯಾದ ನಾನು ನಂತರ ಅವರು ಏನಾಗಿದೆ ಏನಾದರು ಸಹಾಯ ಬೇಕೇ ಎಂದು ವಿಚಾರಿಸಿದಾಗ ಸ್ವಲ್ಪ ಸಮಾಧಾನತಂದುಕೊಂಡೆನು. ಅವರ ಬಳಿ ಸರಿಯಾದ ಜಾಕ್ ಇದ್ದೀತು. ಅವರ ಸಹಾಯದಿಂದ ಸ್ಟೆಪ್ನಿಯನ್ನು ಜೋಡಿಸಲಾಯಿತು. ಆದರೆ ಆ ಚಕ್ರದಲ್ಲಿ ಕಡಿಮೆ ಹವೆಯಿತ್ತು. ಆದ್ದರಿಂದ ಆ ಯುವಕರ ವಾಹನದಲ್ಲಿ ನಾನು ಮತ್ತು ನನ್ನ ಕುಟುಂಬವು ಪಂಚರ್ ಶಾಪ್ ವರೆಗೂ ಪ್ರಯಾಣ ಬೆಳೆಸಿದೆವು. ಇಷ್ಟರಲ್ಲಿ ಕೇವಲ ಸ್ಟೆಪ್ನಿಯನ್ನು ನಂಬಿಕೊಂಡು ವಿಮಾನ ನಿಲ್ದಾಣ ತಲುಪುವುದು ಆಗಲಾರದೆಂದು ನನ್ನ ಅಣ್ಣನಿಗೆ ಕರೆ ಮಾಡಿ ಯಾವುದಾದರೂ ಇನ್ನೊಂದು ವಾಹನದ ಬಗ್ಗೆ ವಿಚಾರಿಸಿದೆನು. ನಾವು ಸಿರಾ ಪಟ್ಟಣದಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದ್ದೆವು.

ಪಂಚರ್ ಶಾಪ್ ಬಳಿ ಬಂದು ನೋಡಿದಾಗ ಆ ಸ್ಟೆಪ್ನಿಯ ಸ್ಥಿತಿ ಹೇಗಿತ್ತೆಂದರೆ ಅದರಲ್ಲಿ ಹವೆ ನಿಲ್ಲುತ್ತಲೆ ಇರಲಿಲ್ಲ. ನಾವು ದಾವಣಗೆರೆಯಿಂದ ಹೊರಟ ವಾಹನವು ಮುಂದೆ ಹೋಗುವ ಹಾಗಿರಲಿಲ್ಲ. ಹಾಗಾಗಿ ಪಂಚರ್ ಶಾಪಿನ ವಿಳಾಸ ತಿಳಿಸಿ ಇನ್ನೊಂದು ವಾಹನ ಬರಲು ಖಚಿತಪಡಿಸಿದೆನು. ಆ ವಾಹನವು ಇಪ್ಪತ್ತು ನಿಮಿಷದಲ್ಲಿ ನಾವಿದ್ದ ಬಳಿ ಬಂದಿತು. ಎಲ್ಲಾ ಸಾಮಾನುಗಳನ್ನು ಈ ವಾಹನಕ್ಕೆ ಸ್ಥಳಾಂತರಿಸಿ ನಾವು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆವು. ಆಗ ಸಮಯ ರಾತ್ರಿ ಸುಮಾರು ಹನ್ನೊಂದು ಗಂಟೆ ಮೂವತ್ತು ನಿಮಿಷಗಳು. ಅಲ್ಲಿಂದ ವಿಮಾನ ನಿಲ್ದಾಣ ತಲುಪಲು ಇನ್ನೂ ಎರಡು ಗಂಟೆ ಮೂವತ್ತು ನಿಮಿಷ ಬೇಕಿತ್ತು, ಅದು ಏನೂ ಅಡಚಣೆ ಇಲ್ಲದಿದ್ದರೆ. ದೇವರ ಮೇಲೆ ಭಾರವನ್ನು ಹಾಕಿ ನಮ್ಮ ಪ್ರಯಾಣ ಸಾಗಿಸಿದೆವು.

ನಾವು ಸರ್ವಿಸ್ ರೋಡ್ನಿಂದ ಹೊರಟು ಹೆದ್ದಾರಿ ಹಿಡಿದ ಕೆಲವೇ ಕ್ಷಣಗಳಲ್ಲಿ ವಾಹನದ ಎಂಜಿನ್ ನಿಂತುಬಿಟ್ಟಿತು. ಚಾಲಕನು ವಾಹನವನ್ನು ಹೆದ್ದಾರಿ ಪಕ್ಕಕ್ಕೆ ನಿಲ್ಲಿಸಲು ಒಮ್ಮೆಲೇ ಭಯವಾಯಿತು. ಇದೇನಪ್ಪ ಹೊಸ ತೊಂದರೆ ಎಂದು ಆಲೋಚಿಸುತ್ತ ಚಾಲಕನಿಗೆ ಕೇಳಿದೆನು, "ಏನ್ ಸರ್ ಎಂಜಿನ್ ಟ್ರಬಲ್ ಇರೋ ಹಾಗಿದೆಯಲ್ಲ?". ಅದೇ ಸಮಯಕ್ಕೆ ಚಾಲಕನು ಇನ್ನೊಮ್ಮೆ ಎಂಜಿನ್ ಸ್ಟಾರ್ಟ್ ಮಾಡುತ್ತಲೇ, "ಒಂದೊಂದ್ ಸಾರಿ ಹೀಗೆ ಆಗುತ್ತೆ ಸರ್, ಹೆದರಬೇಡಿ" ಎಂದು ಸಮಾಧಾನ ಹೇಳಿದನು. ಮುಂದೇನೂ ಅಡಚಣೆ ಇಲ್ಲದೆ ಬೆಂಗಳೂರು ತಲುಪಿದೆವು. ಅಲ್ಲಿಂದ ವಿಮಾನ ನಿಲ್ದಾಣವು ಸುಮಾರು ನಲವತ್ತೈದು ನಿಮಿಷಗಳು. ಚಾಲಕನಿಗೆ ಕೊಡಲು ಹಣವಿಲ್ಲದ ಕಾರಣ ಅಲ್ಲಿಯೇ ಒಂದು ಏಟಿಎಂ ಹತ್ತಿರ ವಾಹನ ನಿಲ್ಲಿಸಲು ಹೇಳಿ ಹಣ ಬಿಡಿಸಿಕೊಂಡು ಬಂದೆನು.

ಕೊನೆಗೆ ನಾವು ವಿಮಾನ ನಿಲ್ದಾಣ ತಲುಪಿದಾಗ ಬೆಳಗಿನ ಜಾವ ಎರಡು ಗಂಟೆ ಹದಿನೈದು ನಿಮಿಷವಾಗಿತ್ತು. ತಾರಾತುರಿಯಲ್ಲೇ ಸಾಮಾನುಗಳೆನ್ನೆಲ್ಲ ಕೆಳಗಿಳಿಸಿಕೊಂಡು ವಿಮಾನ ನಿಲ್ದಾಣದ ಒಳಗೆ ಹೋದೆವು. ಏರ್ಲೈನ್ಸ್ನವರು ಇನ್ನೂ ಸಾಮಾನುಗಳನ್ನು ಸ್ವೀಕರಿಸುತ್ತಿದ್ದರು. ಹಾಗಾಗಿ ಚೆಕ್ ಇನ್ ಮಾಡಿ ನಮ್ಮ ಗೇಟ್ ಬಳಿ ತೆರಳಿ ಮನೆಗೆ ಕರೆ ಮಾಡಿ ತಿಳಿಸಿದೆವು. ಅಲ್ಲಿಯವರೆಗೂ ಅವರು ಘಾಬರಿಯಾಗಿಯೇ ಇದ್ದಂತಿತ್ತು. ನನ್ನ ತಾಯಿಯವರು "ನೋಡು ಗಣೇಶನ ವಿಗ್ರಹ ಬಿಟ್ಟು ಹೊರ್ಟಿಡ್ರಿ. ಅವನನ್ನ ಕರ್ಕೊಂಡು ಹೋಗಿದ್ದಕ್ಕೇನೆ ನಿಮ್ಮ ಎಲ್ಲಾ ವಿಘ್ನಗಳನ್ನೂ ದೂರ ಮಾಡಿದ್ದಾನೆ" ಎಂದರು. ನನ್ನ ತಂದೆಯವರು "ಗಣೇಶ ನಿಮ್ಮಿಂದ ಪೂಜೆ ಮಾಡಿಸ್ಕೊಳೋದಕ್ಕೆ ನಿಮ್ಮನ್ನು ಕರ್ಕೊಂಡು ಹೋಗಿದಾನೆ" ಎಂದರು.

ಎಲ್ಲವೂ ಸಿನಿಮೀಯ ರೀತಿಯಲ್ಲಿ ನಡೆದು ಹೋದಂತಿರಲು ನನಗನ್ನಿಸಿದ್ದು  ಇದು - ಗಣೇಶನು ನಮ್ಮನ್ನು ಕರೆದುಕೊಂಡು ಹೋದನೋ ಇಲ್ಲವೋ ನನಗೆ ತಿಳಿಯದು. ಆದರೆ ನಾವು ಆ ಕತ್ತಲಲ್ಲಿ ನಿಂತಿದ್ದಾಗ ನಮಗೆ ಪರಿಚಯವೇ ಇಲ್ಲದೆ ಸಹಾಯ ಮಾಡಿದ ಆ ಯುವಕರು ಹಾಗೂ ತಡರಾತ್ರಿಯಲ್ಲಿ ನಮ್ಮನ್ನು ಕರೆದೊಯ್ಯಲು ಸಿದ್ಧನಾದ ಸಿರಾ ಪಟ್ಟಣದ ಆ ಚಾಲಕ, ಇವರ ಸಹಾಯವಿಲ್ಲದೆ ನಾವು ವಿಮಾನ ನಿಲ್ದಾಣವನ್ನು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಿರಲಿಲ್ಲ. ದೇವರಿಗೆ ಮಾತ್ರ ಕೃತಜ್ಞತೆ ಸಲ್ಲಿಸಿದರೆ ಆ ದೇವರು ಮೆಚ್ಚುತ್ತಾನೆಯೇ?!

Friday, June 23, 2017

Real Estate

Seena had fallen in to the most common trap set by real estate marketers namely, over-promised amenities and the seemingly low advertised prices which do not include the taxes and fees. The expo was modest in terms of the flat designs that were offered and the pictures of the neighbourhoods looked okay. The common theme throughout the Kanteerava stadium, where the expo was being held, was the deceptively low advertised prices which would bloat to high prices once you include the extras. 

Seena went around several stalls laid out by various vendors until he came across one vendor's offer which he could not believe at first, but the sales person in that booth was all set to deliver his pitch in a calm and professional manner. "Hello there, my name is Prabhu and I am representing Heavenly Estates. Whom do I have the pleasure to talk today?"

"My name is Seena. The stuff that you are advertising over on that corner is weird and interesting at the same time", Seena was pointing to the right corner of the booth. 

"Oh! That's our brand new offering but let's first get started with our popular stuff. We have a new construction coming up just fifteen kilometres from the city center and conveniently located close to the Northern metro line.  Also very close to the airport, just thirty minutes sir! We have 1bhk, 2bhk and 3bhk homes available at thrift prices."

"That's very impressive. So, is the advertised price of thirty lakh rupees, that of the 2bhk home?", asked Seena. 

"No, Sir. That's our studio apartment, but we are currently not offering it since none of our customers have shown any interest in studio apartments".  

Seena was wondering, how the hell could they advertise something that's not offered, but that's the kind of marketing game most of these companies had been playing. "How much does the 2bhk home cost?", enquired Seena. 

"Sir, that ranges from sixty lakh to eighty lakh rupees, depending on which direction and floor you want. If you want it fully finished it's going to be ten lakh rupees extra", Prabhu answered.

"Fully finished meaning with cabinets and appliances?"

"No sir, fully finished meaning tiles and doors will be fit"

Seena wondered what the f*** was going on but tried to keep his calm. "I cannot afford any of your offerings; even your non-existent studio home is not affordable for me". 

"Sir, don't worry. Now let's come to our next offering which many people can afford and I am pretty sure you can afford too. We are one of the first in the market to offer such a product. Don't worry if you can afford a place right now for living, but you can have a nice gorgeous place to finally rest in peace! We offer lake view spots, hill-side spots, you name it!"

"How big are these spots?"

"Six by three; people can buy multiple spots to rest comfortably based on their affordability". 

"How much does a spot cost?"

"You pay one thousand rupees monthly for each spot."

"And how long is the payment?"

"You would keep paying until you are ready to occupy the spot!"

"What? That's going to be a lot of money over the life-time"

"Yes sir, we understand. That's why our company has some good offering for youngsters like you, which is that you can qualify for a thirty year cap if you are under 30" 

"Would you guarantee that a spot would be available when one is ready?"

"Absolutely sir! You just need to give a call to this number and we will make sure that the spot is ready", Prabhu was pointing to a number on one of the fliers. 

This marketing pitch was reaching completely absurd levels. Seena was wondering how the hell would one know when he/she is ready, but he was determined to guage the absurdity co-efficient of this pitch by letting it reach its completion. 

"And you can even give a spot as a gift to your friends and family", Prabhu continued.

Seena's head reeled and had reached its patience limit. Prabhu had more to offer since his face seemed to light up before he started, "If you sign up today, you can enter a raffle to win a spot next to this famous personality". Prabhu was pointing to the photo of a famous personality who was currently in exile.

"Aiyo Prabhuve!", cried Seena.

"Excuse me sir?"

"No, not you Sir. I was just remembering my god. Your company is aptly named 'Heavenly estates'!". Seena bid adieu to the stall and hurried out of the Kanteerava studium. 

Saturday, May 20, 2017

Musophobia

I remember times as a kid I used to hold dead mice by their tail and fling them into the garbage or into the woods. It was casual and it never bothered me. I hadn't encountered mice since a couple of decades until I became a home owner. It was now time to deal with the mice face to face. It was a dreadful experience and I realized that I had a fear of mice.

Yes, mice! I even looked up the word for it and it's called "Musophobia". I was certain that I was musophobic when I couldn't sleep for two nights; every minor sound would make me jump. I was even worried that the mice would encroach into the whole house up from the basement.

Every time I saw a mouse in the trap, I was scared to take it out, afraid that it would jump up on me. I cannot explain the source of this fear which has the potential to bring several sleepless nights upon me.

But, over time I have learnt to deal with these creatures who are part of my surroundings, not being sure who is encroaching whose space!

[Picture courtesy]

Thursday, May 4, 2017

ಚುಟುಕಗಳು

 

ಮನೆಕೆಲಸ

ನನ್ನ ಸ್ನೇಹಿತನಿಗೆ ಮನೆಯಲ್ಲಿ ಕೆಲಸವಿತ್ತು
ನನ್ನ ಸ್ನೇಹಿತನಿಗೆ ಮನೆಯಲ್ಲಿ ಕೆಲಸವಿತ್ತು
ಏಕೆಂದರೆ ಅವನ ಮನೆಯಾಕೆಗೆ ಕೆಲಸವಿತ್ತು!!

 

Saturday, February 4, 2017

The Grand Circus

People who came there expected to see a movie but they had a surprise awaiting them. It was not a movie anymore but it had turned out to be a grand circus! The circus has begun and the ring master is using his whip to show the world that he is the boss and that he is in control. He uses his whistle often to scare those around him and has promises of better food along the way. He is promising a bigger and better circus under his mastery but people did not expect a circus. In fact they did not know what to expect! The ring master has hired clowns who can sing and dance the best to his ridiculous tunes. Time will decide how long the people would tolerate this circus since they were expecting a movie.  

Saturday, April 6, 2013

Money!!

Money!!

mon·ey
noun, often attributive \ˈmə-nē\
something generally accepted as a medium of exchange, a measure of value, or a means of payment: as
a : officially coined or stamped metal currency b : money of account c : paper money

(Above is one of the definitions of money from www.merriam-webster.com. Most of the people need money for food, clothing, shelter, hobby and other bazillion things which may or may not make sense!!)

 ("Money" by Pink Floyd)

Have you ever wondered what is the ultimate source of your money? If you are earning, your immediate source of money would be your employer and if you are not earning, your immediate source of money would be your parents or friends or someone who has money and is willing to share some of it with you. 

But where do the immediate sources of money get their money from? For example, if you are employed by a company, the company is your immediate source of money. Let's suppose that the company gets its money by making profits out of its products (or in case the company is not in profit, it might get its money from some loaner. Company can mean any institution/enterprise which is employing people). To make matters simple, let's also suppose that the products are bought by some people having money. So, in this "simple" money-flow model, the flow of money is:

People-->Company-->Employees

The "People" in the model should have an immediate source of money which could be one of the two sources initially mentioned. Those immediate sources should also get their money somehow which results again in a model similar to the "simple" model. By extension, the flow of money is: 

People1-->Company1-->Employees1/People2-->Company2-->Employees2/People3-->....

This model could probably be extended over and over again which may or may not give a plausible answer to the question!

 There could be a feedback somewhere in the above flow, but it may not be straight-forward to find the location of the feedback. For example, some part of People3 could contribute to Company1 so that they are getting some part of the money they spent but unfortunately this is not always true. This simple model does not answer the question: "What is the ultimate source of my money?" but the answer could be that the source is distributed, just like the source of water in a river!!

Sunday, December 9, 2012

How long...

How long should I waitFor the trees to come alive!
For their leaves to turn green!
For those birds to make their 
Nests amidst the foliage!

How long should I wait
To listen to their songs
And sing with them
How long should I wait
For the flowers to blossom
Into beautiful colors!

How long should I wait
For the view of green grass!
To see the bugs and 
Grasshoppers hop around
And play in the grass!


How long should I wait
To see the nature spring back to Life!
How long should I wait 
For the Spring...?!


Sunday, June 3, 2012

Momentary Lapse of Reason

I guess it happens with every one; if you stick with sanity during that one moment, you will be fine.

Saturday, October 29, 2011

Dilemma?!

A lot of dilemmas in a day from the time I get up - whether to get up or sleep for some more time; whether to walk to work or take my car, etc. Some people even have a dilemma of life and death! But the dilemma that I came across is something which doesn't surface unless given some thought. The dilemma is between Religion and God; about being religious or theist devout. Is religion the path to God or is God the path to religion? A religion may or may not be bound by one God or even many Gods. Religions try to give a shape or rather a definition of God; but the ultimate definition of God would probably have to be found by the individual. Some may even have multiple definitions! (This sounds interesting; especially when this can be used by an individual to influence the various kinds of people with whom he would interact) 


Some people may end up being both religious and devout, which I would say is a success of that religion. But, a lot of people tend to forget the basics when it comes to God/Religion. A non-religious thing done in the name of God may or may not make a person either religious or devout. "It's been said that Buddha and Jesus would laugh or cry if they'd known what was done in their name" [The Man from Earth]. Throughout the history, the teachings of great immortals have been overshadowed by unmindful acts of mere mortals over centuries. But, would there be an end to the quest for God? Would it be more dangerous than the never-ending quest for God?

munjane

ಮುಂಜಾವಿನ ಮಂಜು ಬಲು ಚೆಂದ
ತರುವುದು ಅದೆಂತಹ ಆನಂದ

ಆ ಹೂಬಿಸಿಲಿನ ವಾತಾವರಣ
ಕೆಂಪು ಸೂರ್ಯನ ಆ ಕಿರಣ

ಮುಂಜಾವಿನ ಸವಿಯ ಸವಿದವನೇ
ಬಲ್ಲ ಕಳೆದು ಹೋದೀತೆಂಬ ಭಯ
ತರವಲ್ಲ ದಿನ ಕಳೆದ ತರುವಾಯ
ಪುನಃ ಬರುವುದು ಸೊಬಗಿನ ಮುಂಜಾನೆ

Friday, February 11, 2011

Palindrome dates!

One of my friends reminded me of speciality of today's date i.e. 11-02-2011 (British and Indian date format). It is a palindrome! I started digging more into it and wondered how common are these palindrome dates. In the format considered here, we could see that there were none starting from 12th century to 19th century!! And in this century i.e. 2001 to 2100, these palindrome dates would only occur only on 28 days in the months of February (in various years like 2001,2002, 2010, 2011, 2012, 2020, 2021, 2022, 2030, 2031, 2032, etc). In the next century, these palindrome dates will occur for 31 days in the months of December (in various years).

For this century the probability of a day having a palindrome date is 28/(36500) = 7.67e-4.

Conclusion: Palindrome dates are not very common!!

Playlist of beautiful Kannada songs on Sun

ಸೂರ್ಯನ ಕುರಿತ ಕನ್ನಡದ ಅದ್ಭುತ ಚಿತ್ರಗೀತೆಗಳು  Here is the YouTube playlist